ಹೇಳಲೇ ಬೇಕಾದ್ದು...
ಎಷ್ಟೋ ಸುಳ್ಳಿನ ಅಂಶ ಬೆರೆತಿರುತ್ತದೆ. ಆದ್ದರಿಂದಲೇ ಇವುಗಳೆಲ್ಲ ಕತೆಗಳು-
ಬರಿಯ ಸುಳುಗಳೇ ಇರುವುದಿಲ್ಲ-ನಿಜಾಂಶವೂ ಇರುತ್ತದೆ. ಆದುದರಿಂದ ಇವುಗಳೆಲ್ಲ ಬರೀ ಕತೆಗಳೇ ಅಲ್ಲ-ವ್ಯಕ್ತಿಗತ ಅಂಶ-ವಾಸ್ತವ.
ಈ ಸುಳ್ಳು-ನಿಜಗಳ ನಡುವೆ ಏನಾದರೂ ಅರ್ಥಗಳಿದ್ದರೆ ಈ ಅರ್ಥಗಳನ್ನು ಕಟ್ಟಿದ್ದು, ರೂಪಿಸಿದ್ದು ನಾನೊಬ್ಬನೇ ಅಲ್ಲ. ಎಷ್ಟೋ ಜನ ಪರಿಸಿಚಿತರು-ಸ್ನೇಹಿತರು. ಜೀವನಕ್ಕೆ-ಬದುಕಿಗೆ ಅನಿವಾರ್ಯವಾಗಿರುವವರೂ ಇದ್ದಾರೆ.
ನನ್ನಾಕೆ ಸೀತ ನನ್ನೆಲ್ಲ ತಲೆತಿರುಕುತನವನ್ನು ಸಹಿಸಿಕೊಂದು ಬಂದಿದ್ದಾಳೆ. ತಾನು ದೊಡ್ಡ ಚೇತನವಾಗಿ, ನನ್ನಲ್ಲಿ ಬದುಕಿನ ಬಗೆಗೆ ಮಮಕಾರವನ್ನು ಉಳಿಸಿದ್ದಾಳೆ.
ಉಳಿದಂತೆ ಟಿ ಆರ್ ಸುಬ್ಬರಾವ್, ಅನ್ನಪೂರ್ಣ, ಎಂ ರಾಜಾಮಣಿ, ಎಂ ಪ್ರಕಾಶ್, ರಾಮಕೃಷ್ಣ, ವಿಶ್ವನಾಥ್ರಾವ್, ವಿಶ್ವನಾಥ್ ಹೆಚ್, ಸಮ್ತೋಷ್, ಎಸ್ ಪ್ರಸಾದ್ (ಪಚ್ಚಿ), ಮಾಧವಪ್ರಸಾದ್, ಎಂ ಕೆ ಅನಿಲ್, ಎಂ ರಮೇಶ್, ಮುಕುಂದ, ಶಿವಪ್ರಕಾಶ್, ಬಾಗೇಶ್ರೀ, ಕೇಶವಮಳಗಿ, ಮುರುಳೀಧರ ಖಜಾನೆ, ಗೋಪಾಲಹೆಗ್ಡೆ,..ಪಟ್ಟಿ ಉದ್ದಕ್ಕೂ ಬೆಳೆಸಬಹುದು. ಚಂದ್ರಶೇಖರ್‌ರಿಂದ ನಾನು ಕಲಿತದ್ದು, ಗಳಿಸಿದ್ದು ಅಪಾರ-ನೆನೆಯದಿರಲು ಸಾಧ್ಯವೇ ಇಲ್ಲ. `ಅದ್ವೈತ'ವನ್ನು ಇಂಗ್ಲಿಷ್‌ಗೆ ಅನುವಾದಿಸಿದ ಭರಧ್ವಾಜ್‌ರಿಗೆ ಕೃತಜ್ಞತೆಗಳು.
ಕತೆಗಳನ್ನು ಪ್ರಕಟಿಸಿದ ಪ್ರಜಾವಾಣಿ ಬಿ ವಿ ವೈಕುಂಠರಾಜು, ವೈಎನ್‌ಕೆ, ತುಷಾರದ ಈಶ್ವರಯ್ಯ, ಸುದ್ಧಿಸಂಗಾತಿಯ ಲಕ್ಷ್ಮೀಪತಿ ಕೋಲಾರ, ಚಿರಂಜೀವಿ ಇವರೆಲರ ನಡುವೆ ನನ್ನ ಮಗ ಚೀನಿ, ಮಗಳು ನಂದಿನಿ, ಕಶ್ಯಪ ಪ್ರಿಂಟರ್ಸ್‌ನವರನ್ನೂ ನೆನೆಯುತ್ತಾ-
ವಿಶೇಷವಾಗಿ ಮುನ್ನುಡಿ ಬರೆದುಕೊಟ್ಟ ಎನ್‌ಎಂಕೆಅರ್‌ವಿ ಕಾಲೇಜಿನ ಮನುಚಕ್ರವರ್ತಿ, ರಕ್ಷಾಪುಟಕ್ಕೆ ತನ್ನದೇ ಮೆರಗು ಅರ್ಥ ನೀಡಿದ ಕಲಾವಿದ ಅರ್ ಸೂರಿ, ಇವರಿಗೆಲ್ಲ ಹೃತ್‌ಪೂರ್ವಕ ಕೃತಜ್ಞತೆಗಳು.
ಮತ್ತೂ ಒಂದು ವಿಷಯ-
ಈ ಸಂಕಲನದ್ಲ್ಲಿ ಎರಡು ಅಪ್ರಕಟಿತ ಕತೆಗಳನ್ನು- `ಸುಳ್ಳು ಸುಳ್ಳೇ ಒಂದು ಕತೆ', `ಟಿಪ್ಸ್ ಸುತ್ತ ಮುತ್ತ' ಸೇರಿಸಿದ್ದೇನೆ. ಟಿಪ್ಸ್...ಬಹಳ ಕಾಲದಿಂದಲೂ ವರ್ಷಾನುಕಾಲ ಒಳಗೇ ಗಿರಕಿ ಹೊಡೆಯುತ್ತಿದ್ದುದು ಹಿಡಿತಕ್ಕೆ ದೊರೆಯದೇ ಹೋಗಿತ್ತು. `ಸುಳ್ಳು ಸುಳ್ಳೇ ಒಂದು ಕತೆ' ಬರೆದು ಮುಗಿಸಿದ ನಂತರವೇ ಹಿಡಿತಕ್ಕೆ ಸಿಕ್ಕಿ ತನ್ನಂತೆ ತಾನೇ ಅಪ್ರಯತ್ನಕವಾಗಿ ಬರೆಸಿಕೊಂಡಿತು. ಸ್ಪೂರ್ತಿಯಾಗಿ ನಿಂತವರಿಗೆ ವಿಶೇಶ ಗೌರವ ಸೂಚಿಸಿ ಧನ್ಯವಾದಗಳನ್ನು ಹೇಳುತ್ತಿದ್ದೇನೆ.
ಶೇಖರ್‌ಪೂರ್ಣ
0 Comments:
Post a Comment
Subscribe to Post Comments [Atom]
<< Home