ಹಿಂದೆ ತಿರುಗಿ ನೋಡಿದಾಗ
ಈ ಕತೆಗಳನ್ನು ಮತ್ತೆ ಒಮ್ಮೆ ಓದಿದಾಗ "ಅಯ್ಯೋ ಇದೆಲ್ಲ ನಾನು ಬರೆದದ್ದ" ಎಂದು ಅಚ್ಚರಿ ಪಡುವಷ್ಟು ಕೆಟ್ಟದಾಗಿ ಕಾಣಿಸಿದವು. ಬರೆದದ್ದಾಗಿವೆ, ಪ್ರಕಟಿಸಿಯೂ ಆಗಿವೆ, ಕಾಲಗತಿಯಲ್ಲೂ ಇವು ಯವುದಕ್ಕೂ ಯಾವುದೇ ಸಾಹಿತ್ಯಾತ್ಮಕವಾಗಿ ಬೆಲೆ ಇಲ್ಲ ಎಂದು ನಾನೇ ವಿಮರ್ಶಾತ್ಮಕವಾದ ಮೌಲ್ಯಾಂಕನವನ್ನು ಮಾಡಿಬಿಡುವುದು ಆತುರದ ಕ್ರಮ. ಬರವಣಿಗೆಯ ಶೈಲಿ ಬದಲಾಗಿದೆ, ಇತ್ತೀಚೆಗೆ ಬರೆಯುತ್ತಿರುವವರ ಮೊನಚು ಖಂಡಿತವಾಗಿಯೂ ಈ ಕತೆಗಳಲ್ಲಿ ಇಲ್ಲ ಎಂದು ನನಗೆ ಅನ್ನಿಸಿದರು, ೧೯೭೮ ರಲ್ಲಿ ಹೇಗೆ ಅಲೋಚಿಸುತ್ತಿದ್ದೆವು, ನಮ್ಮ ಮೇಲಿದ್ದ ವೈಚಾರಿಕ ಪ್ರಭಾವಗಳೇನೇನು ಎವ್ವ್ನುವುದಕ್ಕೆ ಒಂದಷ್ಟು ರೆಫೆರೆನ್ಸ್ ಆದರೂ ಈ ಕತೆಗಳು ನೀಡಬಲ್ಲದು ಎನ್ನುವ ಆಲೋಚನೆಯಿಂದ ಅವುಗಳೆಲ್ಲವನ್ನು ಸಂಗ್ರಹಿಸಿ ಇಟ್ಟಿದ್ದೇನೆಯೇ ಹೊರತು, ಬೇರೆ ಯಾವ ಉದ್ದೇಶವೂ ಈ ಪ್ರಕಟಣೆಯ ಹಿನ್ನೆಲೆಯಲ್ಲಿ ಇಲ್ಲ. ಓದಿ, ನಕ್ಕು ಡಿಸ್‌ಮಿಸ್ ಮಾಡಬಹುದಾದ ಕೆಟ್ಟ ಅಪ್ರಬುದ್ಧ ಕತೆಗಳೂ ಇವೆ, ಅವುಗಳ ನಡುವೆಯೇ ಈಗ್ಯೆಗೂ ಪ್ರಸ್ತುತವಾದ ಒಂದೆರಡು ಅಂಶಗಳಾದರೂ ಇದ್ದೇ ಇದೆ ಎನ್ನುವ ವೈಚಾರಿಕ ಹುಂಬತನವೂ (ಹಠಮಾರಿತನ?)ಈ ಪ್ರಕಟಣೆಯ ಹಿನ್ನೆಲೆಯಲ್ಲಿ ಇದೆ. ಓದಿದಾಗ, ನಿಮಗೇನಾದರೂ ಅನ್ನಿಸಿದರೆ, ಎರಡು ಸಾಲು ಗೀಚಿ ನಿಮ್ಮ ರುಜು ಹಾಕಿಬಿಡಿ.
ಶೇಖರ್‌ಪೂರ್ಣ
3 Comments:
ಏನ್ಸಾರ್ ಇಂತಹ ಸೂಪರ್ ಕಥೆಗಳನ್ನು ಕೆಟ್ಟದ್ದು, ಅಪ್ರಬುದ್ಧ ಎಂದರೆ ಹೇಗೆ? ಇದಕ್ಕಿಂತ ದರಿದ್ರವಾಗಿ ಬರೆಯೋ ನಮ್ಮಂತಹವರನ್ನು ಜನ ಏನನ್ನಬೇಕು?
ಕಥೆಗಳು ಬಹಳ ಚೆನ್ನಾಗಿವೆ ಸಾರ್? ಈ ಮುಂಚೆ ಎಲ್ಲಿಯೂ ಓದಿರಲಿಲ್ಲ. ತೋರಿಸಿದ್ದಕ್ಕೆ ಧನ್ಯವಾದಗಳು.
ನಿಮ್ಮನ್ನು ದಾರಿ ದೀಪವನ್ನಾಗಿಸಿಕೊಳ್ಳುತ್ತಿರುವೆ.
ಬ್ಲಾಗಿನಲ್ಲಿ ಪುಟ್ಟ ಪುಟ್ಟ ಮುದ್ದು ಮುದ್ದಾಗಿನ ಸಣ್ಣ ಕಥೆಗಳನ್ನು ಬರೆದರೆ ತುಂಬಾ ಚೆನ್ನಾಗಿರುತ್ತಿತ್ತು ಸರ್...
ನಮಸ್ತೇ ಶೇಖರ್ ಪೂರ್ಣ ಸರ್,
ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!
ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ ‘ಪ್ರಣತಿ’, ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.
ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ, ಬೆಂಗಳೂರು
ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, ‘ದಟ್ಸ್ ಕನ್ನಡ’ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, ‘ಸಂಪದ’ದ ಹರಿಪ್ರಸಾದ್ ನಾಡಿಗ್, ‘ಕೆಂಡಸಂಪಿಗೆ’ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.
ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, ‘ಪ್ರಣತಿ’ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.
ಅಲ್ಲಿ ಸಿಗೋಣ,
ಇಂತಿ,
ಶ್ರೀನಿಧಿ.ಡಿ.ಎಸ್.
Post a Comment
Subscribe to Post Comments [Atom]
<< Home